ಕೇರಳ ರಾಜ್ಯ ಭಾರತ್ ಸ್ಕೌಟ್ ಮತ್ತು ಗೈಡ್ಸ್ ನ ಮಂಜೇಶ್ವರ ಉಪಜಿಲ್ಲಾ ಮಟ್ಟದ ಪಟಲಾಂ ನಾಯಕರ ತರಬೇತಿ ಶಿಬಿರ ಸಪ್ಟೆಂಬರ್ 19,20,21 ರಂದು ಹೆದ್ದಾರಿ ಎ.ಯು.ಪಿ. ಶಾಲೆ ಬಾಯಾರಿನಲ್ಲಿ ನಡೆಯಲಿರುವುದು. ಇದರ ಪೂರ್ವಭಾವಿಯಾಗಿ ಸಂಘಟನಾ ಸಮಿತಿಯ ಸಭೆಯನ್ನು ದಿನಾಂಕ 06-08-2014 ರಂದು ಪೈವಳಿಕೆ ಗ್ರಾ. ಪಂ. ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀ ದೇವು ಮೂಲ್ಯ ಉದ್ಘಾಟಿಸಿದರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ನಂದಿಕೇಶ್ ಮುಖ್ಯ ಅಥಿತಿ ಗಳಾಗಿದ್ದರು . ಸ್ಕೌಟ್ ಮತ್ತು ಗೈಡ್ ಮಂಜೇಶ್ವರ ಉಪಜಿಲ್ಲಾ ಕಾರ್ಯದರ್ಶಿ ಶ್ರೀ ಶಿವಾನಂದ ಅರಿಬೈಲು ಪ್ರಾಸ್ತಾವಿಕ ಭಾಷಣಗೈದರು. ಸ್ಕೌಟ್ ತರಬೇತಿ ಶಿಕ್ಷಕ ಶ್ರೀ ರಾಮಮೋಹನ್ ಮಾಸ್ತರ್ ಉಪಸ್ಥಿತರಿದ್ದರು. ಹೆದ್ದಾರಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಆದಿನಾರಾಯಣ ಭಟ್ ಸ್ವಾಗತಿಸಿ, ಸ್ಕೌಟ್ ಮತ್ತು ಗೈಡ್ ಉಪಜಿಲ್ಲಾ ಕೋಶಾಧಿಕಾರಿ ಹಾಗೂ ಎ.ಯು.ಪಿ.ಶಾಲೆ,ಆನೆಕಲ್ಲು ಇದರ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಭಟ್ ವಂದಿಸಿದರು. ಹೆದ್ದಾರಿ ಶಾಲಾ ಶಿಕ್ಷಕಿ ಶ್ರೀಮತಿ ಗೀತಾ ಕೆ. ನಿರೂಪಿಸಿದರು. |
No comments:
Post a Comment