ವಾಚನಾ ಪಕ್ಷಾಚರಣೆಯ ಸಮಾರೋಪ ಸಮಾರಂಭ
ನಮ್ಮ ಶಾಲೆಯ ವಾಚನಾ ಪಕ್ಷಾಚಾರಣೆಯ ಸಮಾರೋಪ ಸಮಾರಂಭವನ್ನು ಸರಕಾರೀ ಹೈಯರ್ ಸೆಕಂಡರಿ ಶಾಲೆ ಪೈವಳಿಕೆಯ ನಿವೃತ್ತ ಪ್ರಾಂಶುಪಾಲರಾದ ಡಾ। ಬೇ .ಸಿ. ಗೋಪಾಲಕೃಷ್ಣ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹೆದ್ದಾರಿ ಶಾಲಾ ಮಿತ್ರಮಂಡಳಿ ಗ್ರಂಥಾಲಯ ಮತ್ತು ವಾಚನಾಲಯದ ಅಧ್ಯಕ್ಷ ಶ್ರೀ ಪಿ. ಗೋಪಾಲಕೃಷ್ಣ ಭಟ್ , ಮಂಜೇಶ್ವರ ತಾಲೂಕು ಗ್ರಂಥಾಲಯ ಅಧ್ಯಕ್ಷ ಶ್ರೀ ಎಸ್. ನಾರಾಯಣ ಭಟ್ ಉಪಸ್ಥಿತರಿದ್ದರು. ಶಾಲಾ ಪಿ.ಟಿ/ಎ . ಅಧ್ಯಕ್ಷ ಶ್ರೀ ಯು. ಶಂಕರ ಭಟ್ ಇವರು ಸಭಾಧ್ಯಕ್ಷರಾಗಿದ್ದರು.